ಒಂದು ವೇಳೆ ನನಗೆ ಅದೃಷ್ಟವಿಲ್ಲದೊಡೆ
ನಿನ್ನನ್ನು ಈ ಜೀವನದಲ್ಲಿ ಭೇಟಿಯಾಗಲು
ನಿನ್ನ ನೋಡಲು ಆಗಲಿಲ್ಲವೆಂಬ ಭಾವನೆ ನನ್ನಲ್ಲಿ ಆಗಲಿ
... ಈ ಕ್ಷಣದಲ್ಲಿ ಮರೆಯಲು ಆಸ್ಪದ ಕೊಡಬೇಡ
ನನ್ನ ಕನಸುಗಳಲ್ಲಿ ಹಾಗೂ ಜಾಗೃತಾವಧಿಯಲ್ಲಿ ನೋವಿನ
ಮೂಟೆಯನ್ನು ಹೊರಲು ಆಸ್ಪದ ಕೊಡು
ದಟ್ಟಣೆಯಿಂದ ಕೂಡಿದ ಈ ಜೀವನ ಸಂತೆಯಲ್ಲಿ
ನನ್ನ ದಿನಗಳು ಮುಗಿಯುತ್ತಿದೆ ಮತ್ತು
ನನ್ನ ಕೈಯಲ್ಲಿ ತುಂಬಿದೆ ದಿನದ ವಹಿವಾಟಿನ ಲಾಭದ ಗಳಿಕೆ
ನನಗೆಂದೂ ಅನಿಸದೇಯಿರಲಿ ನಾನೇನನ್ನೂ ಗಳಿಸಲಿಲ್ಲವೆಂದು
... ಈ ಕ್ಷಣದಲ್ಲಿ ಮರೆಯಲು ಆಸ್ಪದ ಕೊಡಬೇಡ
ನನ್ನ ಕನಸುಗಳಲ್ಲಿ ಹಾಗೂ ಜಾಗೃತಾವಧಿಯಲ್ಲಿ ನೋವಿನ
ಮೂಟೆಯನ್ನು ಹೊರಲು ಆಸ್ಪದ ಕೊಡು
ನಾನು ಯಾವಾಗ ಏದುಸಿರುಬಿಡುತ್ತಾ ಸುಸ್ತಾಗಿ
ರಸ್ತೆಬದಿಯಲ್ಲಿ ಕುಳಿತಿರಲು, ಮಣ್ಣಿನ ಧೂಳಿನ ಕೆಳಸ್ತರದಲ್ಲಿ
ನನ್ನ ಹಾಸಿಗೆ ಹಾಸಿರಲು
ನನಗನಿಸಲಿ ಇನ್ನೂ ಬಹಳ ದೂರದ ದಾರಿಯ ಪಯಣ ಬಾಕಿಯಿದೆಯೆಂದು
... ಈ ಕ್ಷಣದಲ್ಲಿ ಮರೆಯಲು ಆಸ್ಪದ ಕೊಡಬೇಡ
ನನ್ನ ಕನಸುಗಳಲ್ಲಿ ಹಾಗೂ ಜಾಗೃತಾವಧಿಯಲ್ಲಿ ನೋವಿನ
ಮೂಟೆಯನ್ನು ಹೊರಲು ಆಸ್ಪದ ಕೊಡು
ಯಾವಾಗ ನನ್ನ ಕೋಣೆಯನ್ನು ಶೃಂಗಾರ ಮಾಡಿರಲಾಗಿ
ಮತ್ತು ಕೊಳಲ ದನಿ ಹಾಗೂ ನಗುವಿನ ಸಪ್ಪಳ ತುಂಬಿರಲು
ನನಗೆ ಅನಿಸಲಿ ನಾನು ಯಾರನ್ನೂ ನನ್ನ ಮನೆಗೆ ಆಹ್ವಾನಿಸಿಲ್ಲವೆಂದು
... ಈ ಕ್ಷಣದಲ್ಲಿ ಮರೆಯಲು ಆಸ್ಪದ ಕೊಡಬೇಡ
ನನ್ನ ಕನಸುಗಳಲ್ಲಿ ಹಾಗೂ ಜಾಗೃತಾವಧಿಯಲ್ಲಿ ನೋವಿನ
ಮೂಟೆಯನ್ನು ಹೊರಲು ಆಸ್ಪದ ಕೊಡು
ಪ್ರೇರಣೆ: Let me not forget by Rabindranath Tagore
ಬುಧವಾರ, ಸೆಪ್ಟೆಂಬರ್ 22, 2010
ಹೂವು
ಕಿತ್ತುಕೊಳ್ಳಿ ಈ ಸಣ್ಣ ಹೂವನ್ನು ತಡಮಾಡದೆ
ನೆಲಕ್ಕೆ ಬಿದ್ದು ಧೂಳಾಗುವುದೆಂಬ ಭಯವಿದೆ ನನ್ನಲ್ಲಿ\\
ಅವನ ಕೊರಳ ಹಾರದಲ್ಲಿ ಜಾಗ ಸಿಗುವುದೋ ಕಾಣೆ
ಆದರೆ ಗೌರವಿಸೋಣ, ನೋವಿನ ಕೈಗಳಿಂದ
ಸ್ಪರ್ಶಿಸಿ ಕಿತ್ತು ಅರ್ಪಿಸೋಣ ಅವನಿಗೆ
ಸಮರ್ಪಿಸುವ ಕಾಲ ಕಳೆದುಹೋಗುವುದೇನೋ
ಎಂಬ ಭಯವಿದೆ ಆಗದ ಹಾಗೆ ನೋಡಿಕೋ\\
ಅದರ ಬಣ್ಣಗೆಟ್ಟಿದ್ದರೂ, ವಾಸನೆ ಕ್ಷೀಣವಾಗಿದ್ದರೂ
ಆ ಹೂವನ್ನು ಅವನ ಸೇವೆಗಾಗಿಯೇ ಕಿತ್ತುಕೊಳ್ಳಿ
ಇನ್ನೂ ಬಹಳಷ್ಟು ಕಾಲವಿದೆಯೆಂದು ವಿಳಂಬ ಮಾಡಬೇಡಿ\\
ಪ್ರೇರಣೆ: Flower by Rabindranatha Tagore

ಸೋಮವಾರ, ಆಗಸ್ಟ್ 2, 2010
-ಆಂತರ್ಯ-
ಹೃದಯದಾಳದಲ್ಲಿ ವಿರಾಜಿಸುತಿರುವನು
ಅವನ ಸ್ಪರ್ಶದಿಂದಲೇ ನನ್ನತನವು ಜಾಗೃತಗೊಂಡಿತು
ಅವನೇ ನನ್ನೊಳಗಿನ ಆಂತರ್ಯ\\
ಈ ಕಂಗಳ ಮೇಲೆ ಮೋಡಿಮಾಡುವವನು
ಎನ್ನೆದೆಯ ಹೃದಯದ ಭಾವತಂತುಗಳ
ಸಂತೋಷದಿ ನುಡಿಸುವವನು
ಸಂತೋಷ ಹಾಗೂ ಸಂಕಟಗಳಿಗನುಗುಣವಾಗಿ
ಸ್ವರಗತಿಯ ಬದಲಿಸುವವನು\\
ಮಾಯೆಯೆನ್ನುವ ಜೇಡರಬಲೆಯ ನೇಯುವವನು
ಚಿನ್ನ ,ಬೆಳ್ಳಿ,ಬಡತನ ಹಾಗೂ ಸಮೃದ್ದಿಯ ಕ್ಷಣಿಕತೆಯ ತಳುಕುಹಾಕುವವನು
ಕಳ್ಳನೋಟಬೀರಿ ಕಾಲ ಬುಡದಲ್ಲಿ ಶರಣಾಗುವಂತೆ ಮಾಡುವವನು
ಸ್ಪರ್ಶದಿಂದಲೇ ಎಲ್ಲವನ್ನೂ ಮರೆಯುವಂತೆ ಮಾಡುವವನು\\
ದಿನಗಳು ಬಂದವು, ವಯಸ್ಸು ಜಾರಿತು
ನನ್ನ ಹೃದಯದ ಚೈತನ್ಯದ ನಿರಂತತೆಯಲ್ಲಿ
ಹಲವು ಹೆಸರುಗಳು,ಹಲವು ಗೊತ್ತಿಲ್ಲದ ರೂಪಗಳು
ಸಂತೋಷ ಹಾಗೂ ಸಂಕಟದ ಭಾವಾವೆಶಗಳಲ್ಲಿ
ನಿರಂತರ ನನ್ನೊಡನಿದ್ದು ನಡೆಸುವವನು\\
ಪ್ರೇರಣೆ:"Innermost one" by Rabindranatha Tagore
ಭಾನುವಾರ, ಆಗಸ್ಟ್ 1, 2010
-ಕೊಡು ಶಕ್ತಿ-
ಇದು ನನ್ನ ಪ್ರಾರ್ಥನೆ ನಿನ್ನಲ್ಲಿ ಓ ನನ್ನ ದೇವರೇ!
ಹೊಡಿ ಹೊಡಿ ಬಲವಾಗಿ ಹೊಡಿ
ನನ್ನ ಹೃದಯದ ಬಡತನದ ಬೇರಿಗೆ\\
ಕೊಡು ಶಕ್ತಿ ಸಹಿಸಲು ನನ್ನ ಸಂತೋಷ ಹಾಗೂ ದುಃಖ;
ಕೊಡು ಶಕ್ತಿ ಸೇವೆಯಲ್ಲಿ ನನ್ನ ಪ್ರೀತಿ ಹಣ್ಣಾಗಲು;
ಕೊಡು ಶಕ್ತಿ ಬಡವರ ಸೇವೆ ಮಾಡಲು;
ತಲೆಬಾಗದಂತೆ ಮಾಡು ದರ್ಪ ಹಾಗೂ ಅಹಂಕಾರಕ್ಕೆ;
ಕೊಡು ಶಕ್ತಿ ಪ್ರತಿದಿನದ ಜಂಜಾಟಗಳನ್ನು ಎದುರಿಸಲು;
ಕೊಡು ಶಕ್ತಿ ನನ್ನ ಶಕ್ತಿಯನ್ನು ನಿನ್ನಲ್ಲಿ ಶರಣಾಗಿಸಲು;
ಪ್ರೇರಣೆ:"Give me strength" by Rabindranatha Tagore

ಮಂಗಳವಾರ, ಜುಲೈ 27, 2010
-ವಿದಾಯ-
ನನಗೆ ರಜೆ ದೊರಕಿದೆ;
ನನಗೆ ಅಪ್ಪಣೆ ಕೊಡಿ ವಿದಾಯ ಹೇಳಲು ನನ್ನ ಸೋದರರೇ
ನಾನು ನಿಮಗೆಲ್ಲರಿಗೂ ನಮಸ್ಕರಿಸುವೆ ಇಲ್ಲಿಂದ ಹೊರಡಲು\\
ಇಲ್ಲಿ ನಾನು ಕೊಡುತಿಹೆನು ನನ್ನ ಮನೆಯ ಬಾಗಿಲ ಬೀಗದ ಕೈಗಳನು
ಮತ್ತು ನನ್ನ ಮನೆಯ ಹಕ್ಕುಗಳೆಲ್ಲವನ್ನು ಬಿಟ್ಟುಕೊಡುತ್ತಿದ್ದೇನೆ
ನಾನು ನಿಮ್ಮಂದ ಒಳ್ಳೆಯ ಮಾತುಗಳನ್ನು ಮಾತ್ರ ಕೇಳಲಿಚ್ಚಿಸುತ್ತೇನೆ\\
ನಾವುಗಳು ಬಹುಕಾಲ ನೆರೆಹೊರೆಯವರಾಗಿದ್ದೆವು
ಆದರೆ ನಾನು ಕೊಡುವುದಕ್ಕಿಂತ ನಿಮ್ಮಿಂದ ಹೆಚ್ಚಾಗಿಯೇ ಪಡೆದಿದ್ದೇನೆ
ದಿನಗಳು ಕಳೆದುಹೋಗಿದೆ
ಮತ್ತು ನನ್ನ ಕತ್ತಲ ಕೋಣೆಯ ಹಣತೆ ಹೊರಟುಹೋಗಿದೆ
ಕರೆ ಬಂದಿದೆ ಹಾಗೂ ನಾನು ಸನ್ನದ್ದನಾಗಿದ್ದೇನೆ ನನ್ನ ಪಯಣಕ್ಕೆ\\
ಪ್ರೇರಣೆ:"Farewell" by Rabindranatha Tagore

-ಮುಖಾ ಮುಖಿ-
ದಿನೇ ದಿನೇ ಕಳೆದಿದೆ ಓ ನನ್ನ ಜೀವನ ಪ್ರಭುವೇ!
ಸಾಧ್ಯವಾಗುವುದೇ ನಿನ್ನ ಮುಂದೆ ನಿಂತು ಮುಖಾಮುಖಿಯಾಗಲು?
ಕೈ ಕಟ್ಟಿ ನಿಂತಿರುವೆ ಎಲ್ಲಾ ಪ್ರಪಂಚಗಳ ಪ್ರಭುವೇ!
ಸಾಧ್ಯವಾಗುವುದೇ ನಿನ್ನ ಮುಂದೆ ನಿಂತು ಮುಖಾಮುಖಿಯಾಗಲು?\\
ಏಕಾಂತತೆ ಹಾಗೂ ನಿಶಬ್ದವಾದ ನಿನ್ನ ಅಗಾಧವಾದ ಆಕಾಶದ ಕೆಳಗೆ
ಜರ್ಜರಿತ ಹೃದಯದೊಂದಿಗೆ ದೀನನಾಗಿ ನಿಂತಿರುವೆ
ಸಾಧ್ಯವಾಗುವುದೇ ನಿನ್ನ ಮುಂದೆ ನಿಂತು ಮುಖಾಮುಖಿಯಾಗಲು?\\
ಇಂತಹ ಪ್ರಯಾಸದ ಜಗತ್ತಿನಲ್ಲಿ ಗೊಂದಲ , ದುಡಿಮೆ
ಮತ್ತು ಸಂಘರ್ಷವಿದೆ ವೇಗವಾಗಿ ಮುನ್ನಡೆಯುವ ಗುಂಪುಗಳಲ್ಲಿ
ಸಾಧ್ಯವಾಗುವುದೇ ನಿನ್ನ ಮುಂದೆ ನಿಂತು ಮುಖಾಮುಖಿಯಾಗಲು?\\
ಮತ್ತು ಯಾವಾಗ ನನ್ನ ಕೆಲಸಗಳೆಲ್ಲ ಸಾಧ್ಯತೆಯಲ್ಲಿ ಆಗುವುದೋ ಈ ಪ್ರಪಂಚದಲ್ಲಿ
ಏಕಾಂಗಿ ಹಾಗೂ ಮಾತನಾಡದ ಸ್ಥಿತಿಯಲ್ಲಿದ್ದೇನೆ ಓ ದೊರೆಗಳ ದೊರೆಯೇ
ಸಾಧ್ಯವಾಗುವುದೇ ನಿನ್ನ ಮುಂದೆ ನಿಂತು ಮುಖಾಮುಖಿಯಾಗಲು?\\
ಪ್ರೇರಣೆ : "Face to Face" by Rabindranatha Tagore

-ಬಣ್ಣದ ಆಟಿಕೆ-
ಯಾವಾಗ ನಾ ನಿನಗೆ ಬಣ್ಣದ ಆಟಿಕೆ ತರುತಿರಲು, ಓ ನನ್ನ ಮಗುವೆ!
ನನಗೆ ಗೊತ್ತಾಯಿತು ಏಕೆ ಬಣ್ಣಗಳಾಟ ಮೋಡ ಹಾಗೂ ನೀರಿನ ಮೇಲೆ ನಡೆಯುತ್ತಿದೆಯೆಂದು
ಮತ್ತು ಏಕೆ ಹೂಗಳೆಲ್ಲಾ ಬಣ್ಣಗಳಿಂದ ಕೂಡಿ ನಗುತಿದೆಯೆಂದು
.... ಯಾವಾಗ ನಾ ನಿನಗೆ ಬಣ್ಣದ ಆಟಿಕೆ ತರುತಿರಲು, ಓ ನನ್ನ ಮಗುವೆ!\\
ಯಾವಾಗ ನಾ ಹಾಡಿದೆ ನೀನು ನೃತ್ಯ ಮಾಡಲು
ನನಗೆ ತಿಳಿಯಿತು ಏಕೆ ಎಲೆಗಳಿಂದ ಸಂಗೀತ ಹೊಮ್ಮುತಿದೆಯೆಂದು
ಮತ್ತು ಏಕೆ ತರಂಗಗಳು ತಮ್ಮ ದನಿಯನು ಜೊತೆಗೂಡಿಸಿವೆ
ಹೃದಯದಿಂದ ಕೇಳುತಿರುವ ಭುವಿಯೊಂದಿಗೆಂದು
.....ಯಾವಾಗ ನಾ ಹಾಡಿದೆ ನೀನು ನೃತ್ಯ ಮಾಡಲು\\
ಯಾವಾಗ ನಾ ತಂದೆ ಸಿಹಿ ತಿನಿಸುಗಳ ಬೊಗಸೆಯೋಡ್ಡಿದ ಕೈಗಳಿಗೆ
ನನಗೆ ತಿಳಿಯಿತು ಏಕೆ ಜೇನು ತುಂಬಿದೆ ಹೂವಿನ ಒಡಲಲ್ಲಿಯೆಂದು
ಮತ್ತು ಏಕೆ ಹಣ್ಣುಗಳು ರಹಸ್ಯವಾಗಿ ಸಿಹಿರಸವ ಬಚ್ಚಿಟ್ಟುಕೊಂಡಿದೆಯೆಂದು
....ಯಾವಾಗ ನಾ ತಂದೆ ಸಿಹಿ ತಿನಿಸುಗಳ ಬೊಗಸೆಯೋಡ್ಡಿದ ಕೈಗಳಿಗೆ\\
ಯಾವಾಗ ನಾ ಮುತ್ತಿಟ್ಟೆ ನಿನ್ನ ಕೆನ್ನೆಗೆ ನೀ ನಗಲೆಂದು ಓ ನನ್ನ ನಲ್ಲೆ
ನನಗೆ ನಿಚ್ಶಯವಾಯಿತು ಏಕೆ ಆನಂದದಿಂದ ಹೊನಲು ಹರಿದಿದೆ ಬೆಳಗಿನ ಆಕಾಶದಿಂದೆಂದು
ಮತ್ತು ಏಕೆ ಬೇಸಿಗೆಯ ತಂಗಾಳಿ ನನ್ನ ದೇಹದಲ್ಲಿ ಉಲ್ಲಾಸ ತಂದಿದೆಯೆಂದು
.....ಯಾವಾಗ ನಾ ಮುತ್ತಿಟ್ಟೆ ನಿನ್ನ ಕೆನ್ನೆಗೆ ನೀ ನಗಲೆಂದು ಓ ನನ್ನ ನಲ್ಲೆ \\
ಪ್ರೇರಣೆ: "Colored Toys" by Rabindranatha Tagore

ಸೋಮವಾರ, ಜುಲೈ 26, 2010
-ಕಾಣದ ದಾರಿ-
ಯೋಚಿಸುತಿಹೆನು ನಾನು
ಇದೆ ಕೊನೆಯ ಯಾತ್ರೆಯೆಂದು ;
ದೇಹದಲ್ಲಿ ಶಕ್ತಿ ಕ್ಷೀಣಿಸುತ್ತಿದೆ...
ನನ್ನ ಮುಂದಿನ ದಾರಿಯು ಕೊನೆಯಾಗಿದೆ
ಪೂರ್ವ ಸಿದ್ಧತೆಗಳೆಲ್ಲಾ ಬರಿದಾಗಿ
ಕಾಲ ಬಂದೊದಗಿದೆ ಮೌನ ಸ್ಥಳದಲ್ಲಿ ಆಶ್ರಯ ಪಡೆಯಲು\\
ಆದರೆ, ನಾ ಕಂಡುಕೊಂಡೆ ನಿನಗೆ ತಿಳಿದಿದೆ ನನ್ನಲ್ಲಿ ಕೊನೆಯಿಲ್ಲವೆಂದು
ನಾಲಗೆಯ ಹಳೆಯ ಪದಗಳು ಸಾಯುತಿರಲು
ಹೊಸ ಹೊಸ ಮಾಧುರ್ಯ ಎದೆಯಿಂದ ಹೊರಹೊಮ್ಮುವುದು
ಹಳೆಯ ದಾರಿಗಳೆಲ್ಲಾ ಕಳೆದು ಹೋಗಿ
ಹೊಸ ದೇಶವೊಂದು ಒಡಮುಡುವುದು ಕುತೂಹಲದಿ\\
ಪ್ರೇರಣೆ: "Closed path" by Rabindranatha Tagore

-ಮುತ್ತಿನ ಹಾರ-
ಅಮ್ಮಾ, ನನ್ನ ನೋವಿನ ಕಣ್ಣೀರಿನ ಮುತ್ತುಗಳಿಂದ ಪೋಣಿಸಿದ
ಸುಂದರ ಮುತ್ತಿನ ಹಾರ ನಿನ್ನ ಕೊರಳಿಗೆ ಸಂತೋಷದಿಂದ ಹಾಕುವೆ\\
ನಕ್ಷತ್ರಗಳಿಂದ ರೂಪಿತವಾದ ಕಾಲಂದಿಗೆ;
ಪಾದಗಳಲ್ಲಿ ಬೆಳಕ ಚೆಲ್ಲಿ ನಗುತ್ತಿದೆ;
ನನ್ನ ಕಣ್ಣೀರ ಹಾರ ನಿನ್ನ ಎದೆಯಲಿ ನಲಿಯಲಿ\\
ಸಂಪತ್ತು ,ಖ್ಯಾತಿ ಎಲ್ಲವೂ ನಿನ್ನಿಂದಲೇ
ಕೊಡುವುದೋ ? ಬೇಡವೋ? ಎಲ್ಲವೂ ನಿನಗೆ ಸೇರಿದ್ದು;
ಆದರೆ ನೋವಿನ ಕಣ್ಣೀರು ಪೂರ್ಣ ನನ್ನದೇ;
ಅಂತಹ ಸಂಪೂರ್ಣ ನನ್ನದೇ ಆಗಿರುವುದನ್ನು ನಿನಗೆ ಸಮರ್ಪಿಸುತ್ತಿದ್ದೇನೆ;
ಬಹುಮಾನವಾಗಿ ನಿನ್ನ ಆಶೀರ್ವಾದ ನನಗಿರಲಿ\\
ಪ್ರೇರಣೆ: "Chain of pearls" by Rabindranatha Tagore

-ಶಾಶ್ವತತೆಯ ಅಂಚು-
ಕೋಣೆಯ ಎಲ್ಲಾ ಭಾಗಗಳಲ್ಲಿ ಹುಡುಕುತಿಹೆನು
ಗೊಂದಲದ ಆಶಾಭಾವದಲ್ಲಿ
ಅವಳ ಸುಳಿವು ಗೋಚರಿಸಲಿಲ್ಲ\\
ಒಮ್ಮೆ ಕಳೆದು ಹೋದದ್ದು
ಮತ್ತೆಂದೂ ಸಿಗದಿಲ್ಲಿ
ಅಂತಹ ಚಿಕ್ಕ ಮನೆ ನನ್ನದು\\
ನಿನ್ನ ಹೃದಯದ ಬಾಗಿಲಿನಲ್ಲಿ ನಿಂತಿಹೆನು
ಅವಳಿಗಾಗಿ ಬೇಡುತ್ತಾ
ನೀನೋ ಅಮಿತ ಭುವನದ ಒಡೆಯನೆಂದು\\
ನಿಂತಿಹೆನು ನಿಂತಿಹೆನು ಕಾಯುತ್ತಾ
ಸಂಜೆಯಾಕಾಶದ ಬಂಗಾರದ ಮೇಲ್ಚಾವಣೆಯ ಕೆಳಗೆ
ತಲೆಯೆತ್ತಿ ನಿನ್ನ ಕಡೆ ನೋಡುತಿಹೆನು ಆಸೆಯ ಕಣ್ಣುಗಳಿಂದ\\
ನಾನೀಗ ಶಾಶ್ವತತೆಯ ಅಂಚಿಗೆ ಬಂದು ನಿಂತಿದ್ದೇನೆ
ಯಾವುದೂ ನಶಿಸಲಾರದಿಲ್ಲಿ
ಆಶಾಭಾವನೆಯಿಲ್ಲ
ಸಂತೋಷವಿಲ್ಲ
ಕಣ್ಣೀರಿನ ಕಂಗಳಲ್ಲಿ ಯಾವ ದೂರದ ದೃಷ್ಟಿಯುಯಿಲ್ಲ\\
ಓ ಬರಡಾದ ಈ ಜೀವನವು ಸಮುದ್ರದಲ್ಲಿ ಮುಳುಗಲಿ
ಮುಳುಗಲಿ ಪೂರ್ಣತೆಯ ಆಳದಲ್ಲಿ
ಕಳೆದುಹೋದ ಸಿಹಿಯನ್ನೊಮ್ಮೆ ಅನುಭವಿಸುತ್ತೇನೆ
ಈ ಸಮಾನತೆಯ ಜಗದಲ್ಲಿ\\
ಪ್ರೇರಣೆ:"Brick of Eternity" by Rabindranath Tagore

-ಯಾಚಕ ಹೃದಯ-
ಹೃದಯ ಕಲ್ಲಾಗಿ ಶೋಷಣೆಗೆ ರೋಸಿಹೋದಾಗ
ಕರುಣೆಯ ಮಳೆಗೆರೆಯೆ ಬಾ\\
ಆತ್ಮೀಯತೆ ಜನಜೀವನದಿಂದ ದೂರವಾದಾಗ
ಕಣ್ಣೀರ ಗೀತೆಯಾಗಿ ಬಾ\\
ಗೊಂದಲದ ಶಬ್ದ ಮಾಲಿನ್ಯ ಎಲ್ಲೆಡೆಯು ತುಂಬಿದಾಗ
ಓ ಮೌನ ದೇವರೇ ಶಾಂತಿ ಸಮಾಧಾನದೊಂದಿಗೆ ಬಾ\\
ಹೃದಯ ಬೇಡುತ್ತಿದೆ ಶರಣಾಗಿ ಮೂಲೆಯಲ್ಲಿ ಕುಳಿತು
ಓ ಎನ್ನ ಸ್ವಾಮಿಯೇ ಎಲ್ಲಾ ತಡೆಗೋಡೆಗಳನ್ನು ಮುರಿದು ಧೀಕ್ಷಾಬದ್ಧನಾಗಿ ಬಾ\\
ಮನಸ್ಸು ಕುರುಡಾಗಿದೆ ಬೇಡಿಕೆ, ಕತ್ತಲು ಹಾಗೂ ಕೊಳಕಿನಿಂದ
ಓ ಪವಿತ್ರಾತ್ಮನೆ ಎಚ್ಚರಗೊಳಿಸು, ಅರಿವಿನ ಬೆಳಕು ಮೊಳಗಿಸು ಬಾ\\
ಪ್ರೇರಣೆ:"Beggarly Heart" by Rabindranath Tagore

ಭಾನುವಾರ, ಜುಲೈ 25, 2010
-ಬರೆಯುವ ಹಕ್ಕು-
ನೀನು ಹೇಳುವೆಯಮ್ಮ
ತಂದೆಯವರು ಬೇಕಾದಷ್ಟು ಪುಸ್ತಕಗಳನ್ನು ಬರೆದಿರುವರೆಂದು
ಆದರೆ ಅವರು ಏನು ಬರೆದಿದ್ದಾರೆಂದು ನನಗೊಂದು ಅರ್ಥವಾಗದು?;
ಪ್ರತಿ ಸಾಯಂಕಾಲ ನಿನಗೆ ಅವರು ಓದಿಹೇಳುವರು
ನಿನಗಾದರು ಅರ್ಥವಾಗಿದೆಯೆ ಅವರೇನು ಬರೆದಿದ್ದಾರೆಂದು?;
ಅಮ್ಮಾ ಎಂಥ ಚಂದದ ಕಥೆಗಳನ್ನು ಹೇಳುವೆ ನೀನು
ನನಗಾಶ್ಚರ್ಯವಾಗುತ್ತದೆ ಅವರು ಏಕೆ ಅಂತಹುದನ್ನು ಬರೆಯಲಾರರೆಂದು?;
ಅವರೆಂದೂ ಕೇಳಲಿಲ್ಲವೇ ಅವರ ತಾಯಿಯಿಂದ
ರಾಜಕುಮಾರಿಯ ,ದೈತ್ಯರ ಹಾಗೂ ಯಕ್ಷರ ಕಥೆಗಳನ್ನು?
ಅಥವಾ ಅವರು ಅದನ್ನೆಲ್ಲಾ ಮರೆತಿರುವರೆ?
ಯಾವಾಗಲೂ ಅವರು ಸ್ನಾನಕ್ಕೆ ತಡಮಾಡುತ್ತಾರೆ
ನೀನು ನೂರು ಬಾರಿ ಕರೆದರೂ..
ತಿಂಡಿ ,ಊಟವನ್ನು ಬಿಸಿಮಾಡಿ ಅವರಿಗಾಗಿ ಕಾಯುವೆ
ಅವರೋ ಬರೆಯುವುದರಲ್ಲೇ ಎಲ್ಲವನ್ನು ಮರೆಯುತ್ತಾರೆ
ತಂದೆಯವರು ಯಾವಾಗಲೂ ಪುಸ್ತಕಗಳನ್ನು ಬರೆಯುವುದರಲ್ಲೇ ಮಗ್ನರಾಗಿರುತ್ತಾರೆ.
ಯಾವಾಗಲಾದರೂನಾನು ಅವರ ಕೊಠಡಿಯಲ್ಲಿ ಆಟವಾಡಲು ಹೋದರೆ
ಅಮ್ಮಾ ನೀನು ನನ್ನ ಹಿಂದೆಯೇ ಬರುವೆ "ತುಂಟ ಹುಡುಗನೆಂದು" ನನ್ನನ್ನು ಕರೆಯುವೆ ;
ನಾನೇನಾದರೂ ಸ್ವಲ್ಪ ಗಲಾಟೆ ಮಾಡಿದರೆ ನೀನು ಹೇಳುವೆ
"ನಿನಗೆ ಕಾಣುವುದಿಲ್ಲವೇ? ತಂದೆಯವರು ಕೆಲಸ ಮಾಡುತ್ತಿರುವುದು"
ಏನು ವಿನೋದವಿದೆ ಬರೆದು ಬರೆದು ಬರೆಯುವುದರಲ್ಲಿ?
ಯಾವಾಗಲಾದರೂ ತಂದೆಯವರ ಲೇಖನಿಯನ್ನು ಬಳಸಿ
ಅವರ ಪುಸ್ತಕದಲ್ಲಿ ಅ,ಆ,ಇ,ಈ,ಉ,ಊ,...ಎಂದು ಬರೆದರೆ
ನೀನು ನನ್ನನ್ನು ತಡೆಯುವೆ ಏಕೆ ಅಮ್ಮಾ?
ತಂದೆಯವರು ಬರೆದರೆ ನೀನು ಒಂದೂ ಮಾತನಾಡುವುದಿಲ್ಲ ;
ತಂದೆಯವರು ರಾಶಿ ರಾಶಿ ಕಾಗದವನ್ನು ಪೋಲು ಮಾಡಿದರೂ ನಿನಗೇನೂ ಅನಿಸುವುದಿಲ್ಲ
ಆದರೆ ನಾನು ಒಂದೇ ಒಂದು ಕಾಗದವನ್ನು ತೆಗೆದುಕೊಂಡು
ಹಡುಗು ಮಾಡಿದರೆ ನೀನು " ಎಷ್ಟು ತೊಂದರೆ ಕೊಡುವೆ" ಎನ್ನುವೆ;
ಅಮ್ಮಾ ನಿನಗೇನೂ ಅನಿಸುತ್ತದೆ ಹೇಳು ತಂದೆಯವರು ಕಾಗದಗಳ
ಮೇಲೆ ಕಪ್ಪು ಶಾಯಿಯಿಂದ ಎರಡೂ ಬದಿಗಳ ಮೇಲೆ ಬರೆದು ಕೆಡಿಸಿದರೆ?
ಪ್ರೇರಣೆ: "Authorship" by Rabindranath Tagore

-ಚಣ -
ಒಂದು ಚಣ ತಾಳ್ಮೆಯೇ!
ಬಳಿಯಲ್ಲೇ ಕುಳಿತುಕೋ ನಾಚಿಕೆಯೇ?
ಕೈಯ ಕೆಲಸ ಪೂರ್ಣಗೊಳಿಸುವೆ ಆಮೇಲೆ\\
ಕಣ್ಣ ದೃಷ್ಟಿ ಯಿಂದ ನೀನು ದೂರ
ಹೃದಯಕ್ಕೆ ತಿಳಿದಿದೆ ನಿನ್ನ ನಿಶ್ಚಲತೆ ಹಾಗು ವ್ಯವಧಾನ
ಕಾಯಕಕ್ಕಿಲ್ಲ ಕೊನೆ, ಪ್ರಯಾಸದಡವಿಲ್ಲದ ಸಮುದ್ರದಂತೆ ದುಡಿಮೆ\\
ಗ್ರೀಷ್ಮ್ಋತು ಬಂದಿದೆ ಮನೆ ಬಾಗಿಲಿಗೆ
ನಿಲ್ಲದ ನಿಟ್ಟುಸಿರು ಹಾಗೂ ಗೊಣಗಾಟದೊಂದಿಗೆ
ಧು೦ಬಿಗಳು ಜೇನ್ಕರಿಸುತ್ತಿವೆ
ಪರಿಮಳ ಭೀರುವಹೂ ತೋಟದಲ್ಲಿ \\
ಸಮಯ ಬಂದಿದೆ ಮೌನವಾಗಿ
ಎದುರು ಬದುರು ಕುಳಿತು
ಹಾಡಬೇಕಿದೆ ತ್ಯಾಗಗೀತೆ
ಪ್ರಶಾಂತ ಹಾಗೂ ಉಕ್ಕುತ್ತಿರುವ ನೀರವತೆಯಲ್ಲಿ\\
ಪ್ರೇರಣೆ : "A Moment of Indulgence" by Rabindranath Tagore

ಕಾಯಕಕ್ಕಿಲ್ಲ ಕೊನೆ, ಪ್ರಯಾಸ
ದಡವಿಲ್ಲದ ಸಮುದ್ರದಂತೆ ದುಡಿಮೆ\\
ಜೇನ್ಕರಿಸುತ್ತಿವೆ
ಗ್ರೀಷ್ಮ್ಋತು ಬಂದಿದೆ ಮನೆ ಬಾಗಿಲಿಗೆ
ನಿಲ್ಲದ ನಿಟ್ಟುಸಿರು ಹಾಗೂ ಗೊಣಗಾಟದೊಂದಿಗೆ
ಧು೦ಬಿಗಳು Jenkarisuttive
Jenkarisuttive

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)